ಬೆಳ್ಸರಿ

ಪದಂಗುಟ್ಟು

ಕನ್ನಡದ ನನ್ನ ಸ್ನೇಹಿತರ ಮಕ್ಕಳು ಮನೆಯಲ್ಲಿ ಕನ್ನಡ ಮಾತನ್ನಾಡಿದರೂ, ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿರುವುದರಿಂದ ಅವರ ಕನ್ನಡ ಎಲ್ಲಾ ಭಾಷೆಗಳ ಚಿತ್ರಾನ್ನವಾದಂತಾಗಿದೆ. ಕಳೆದ ವಾರ ಸ್ನೇಹಿತೆಯ ಮನೆಯಲ್ಲಿ ಊಟ ಮಾಡುವಾಗ, ಊಟ ಮುಗಿಸಿ ಅಲ್ಲೇ ಕುಳಿತ್ತಿದ್ದ ಆಕೆಯ ಮಗನಿಗೆ ‘ಸ್ವಲ್ಪ ಸಾರು ಹಾಕೋ’ ಎಂದೆ. ಅವನು ‘what’ ಅಂದ. ಪಕ್ಕದಲ್ಲಿ ನನ್ನೊಡನೆ ಊಟಕ್ಕೆ ಕುಳಿತ್ತಿದ್ದ ಅಪ್ಪಟ ಕನ್ನಡದವಳಾದ ಗೆಳತಿಗೆ, ‘ನಿಮ್ಮ ಮನೆಯಲ್ಲಿ ಸಾರಿಗೆ ಏನು ಅಂತೀರಿ’ ಎನ್ನುತ್ತಾ ನೋಡಿದಾಗ ಗೊತ್ತಾಯಿತು ಅವಳು ಯಾರೊಂದಿಗೋ ಮೊಬೈಲ್ ನಲ್ಲಿ ಮಾತಾಡುತ್ತಿದ್ದದ್ದು. ಅವಳ ಮಗನಿಗೆ, ‘ನೋಡೋ ಬರಿ ಅನ್ನ ಇದೆ ಏನು ಹಾಕ್ತಿಯ?’ ಎಂದೆ. ಅವನು ‘ರಸಂ ಹಾಕಲಾ’ ಎಂದ. ಆಗ ನನಗೆ ಕನ್ನಡ ಪದಗಳು ಕಳೆದೇ ಹೋಗುತ್ತಿರುವ ಅನುಭವವಾಯಿತು. ನಮ್ಮ …

ಮುಂದುವರಿಸಿ
Kannada Blog
ಮೆಲ್ಸರಿ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

-:ಮುನ್ನುಡಿ:- ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡಿರುವ ನನಗೆ, ಸ್ನೇಹಿತರೆಲ್ಲ ನೀನು ಸಾಯುವುದಕ್ಕೂ ಮೊದಲು ಎಲ್ಲವನ್ನೂ ಬ್ಲಾಗ್ ಮುಖಾಂತರವಾದರೂ ಪಬ್ಲಿಷ್ ಮಾಡು ಎಂದು ಹೇಳುತ್ತಿದ್ದರು. ಕುವೆಂಪು, ಕಾರಂತರು, ಡಿ.ವಿ.ಜಿ, ಬೇಂದ್ರೆಯವರಂತಹ ಮಹಾನ್ ವ್ಯಕ್ತಿಗಳ ಬರವಣಿಗೆಗಳನ್ನು ಓದಿರುವ ನಮ್ಮ ಕನ್ನಡಿಗರಿಗೆ ನನ್ನ ಬರಹಗಳನ್ನು ಓದಲು ಕೊಡುವುದು ಮಹಾಪರಾಧ ಎಂದೇ ನನ್ನ ಭಾವನೆ. ಹೀಗಾಗಿ ಆ ಪ್ರಯತ್ನ ಮಾಡೇ ಇರಲಿಲ್ಲ. ಆದರೂ ಒತ್ತಾಯ ಜಾಸ್ತಿಯಾದಾಗ ‘ವಾಬಿಸಾಬಿವರ್ಷಾ’ ಎನ್ನುವ ಬ್ಲಾಗ್ ಅನ್ನು ೨೦೧೮ರಲ್ಲಿ ಶುರು ಮಾಡಿ, ಎರಡು ತಿಂಗಳಿಗೇ ಕೆಲಸದ ಒತ್ತಡದಿಂದಾಗಿ ಮುಂದುವರೆಸದೇ ಬಿಟ್ಟಿದ್ದೆ. ಈಗ ಕರೋನಾದಿಂದಾಗಿ ವರ್ಕ್ ಫ್ರಮ್ ಹೋಂ ಆಗಿರೋದರಿಂದ, ಮತ್ತೆ ಸ್ನೇಹಿತರ ಒತ್ತಾಯ ಜೋರಾಗಿದೆ. ನಾನು ಮನೆಯಲ್ಲಿ ಕೆಲಸ ಮಾಡುವುದರಿಂದ ಸಿಗುವ ಸಮಯದಿಂದಾಗಿ ಹೇಳುತ್ತಿದ್ದಾರೋ ಅಥವಾ ಕೊರೋನಾದಲ್ಲೇ ನನ್ನ …

ಮುಂದುವರಿಸಿ