ಜೀವನವನ್ನು ಅಳೆಯುವ ನಾವೇ ಸೃಷ್ಟಿಸಿಕೊಂಡ ನಮ್ಮದೇ ಅಳತೆಗೋಲು!
Tag: Blog
ಅಕ್ಕಾರು – ak̄āru
ಬೇಸಿಗೆಯ ರಜಾದಿನಗಳು
ನಮ್ಮ ಬೇಸಿಗೆಯ ರಜಾದಿನಗಳನ್ನು ಯಾವಾಗಲೂ ನಮ್ಮ ಅಜ್ಜಿಯ ಮನೆಯಲ್ಲೇ ಕಳೆಯುತ್ತಿದ್ದೆ. ಈಗಿರುವಂತೆ ಆಗ ಸಮ್ಮರ್ ಕ್ಯಾಂಪ್ ಗಳು ಇರಲಿಲ್ಲ. ಹೀಗಾಗಿ ಬೇಸಿಗೆ ಶುರುವಾಯಿತೆಂದರೆ ನಮ್ಮ ಕ್ಯಾಂಪ್ ಯಾವಾಗಲೂ ಅಜ್ಜಿಯ ಮನೆಯಲ್ಲೇ! ವಾರ್ಷಿಕ ಪರೀಕ್ಷೆಗೆ ತಯಾರಾಗುವುದಕ್ಕಿಂತ, ಅದಾಗುತ್ತಿದಂತೆಯೇ ಅಜ್ಜಿಯ ಮನೆಗೆ ಹೋಗುವ ತಯಾರಿ ಜೋರಾಗಿರುತ್ತಿತ್ತು. ನನ್ನಮ್ಮ ಮಾಡುವ ಮಾವಿನ ಮಿಡಿಯ ಉಪ್ಪಿನಕಾಯಿ ನಮ್ಮಜ್ಜನಿಗೆ ಬಹಳ ಪ್ರೀತಿ. ಹೀಗಾಗಿ ಫೆಬ್ರವರಿ ಬರುತ್ತಿದ್ದಂತೆಯೇ ಉಪ್ಪಿನಕಾಯಿ ಭರಣಿಗಳನ್ನು ಅಟ್ಟದಿಂದ ಕೆಳಗಿಳಿಸಿ, ಅವನ್ನು ಸ್ವಚ್ಛವಾಗಿ ತೊಳೆದು, ಬಿಸಿಲಲ್ಲಿ ಒಣಗಿಸಿ ಉಪ್ಪಿನಕಾಯಿ ಹಾಕಲು ನನ್ನ ಅಮ್ಮ ತಯಾರಿ ನಡೆಸುತ್ತಿದ್ದಳು. ಭರಣಿಗಳು ಕೆಳಗಿಳಿದಿವೆಯೆಂದರೆ, ನಮಗೆ ಅಜ್ಜಿಯ ಮನೆಗೆ ಇನ್ನು ಕೆಲವೇ ವಾರಗಳಲ್ಲಿ ಹೋಗುವುದು ನಿಶ್ಚಯವೆಂದು ಅರ್ಥವಾಗಿ, ಪರೀಕ್ಷೆಯ ಟೆನ್ಶನ್ ಗಿಂತಲೂ, ಊರಿಗೆ ಹೋಗುವ ಸಂಭ್ರಮ ಹೆಚ್ಚಾಗಿರುತ್ತಿತ್ತು. …
ದೀಪಾವಳಿಯ ಶುಭಾಶಯಗಳು
ಪದಂಗುಟ್ಟು
ಕನ್ನಡದ ನನ್ನ ಸ್ನೇಹಿತರ ಮಕ್ಕಳು ಮನೆಯಲ್ಲಿ ಕನ್ನಡ ಮಾತನ್ನಾಡಿದರೂ, ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿರುವುದರಿಂದ ಅವರ ಕನ್ನಡ ಎಲ್ಲಾ ಭಾಷೆಗಳ ಚಿತ್ರಾನ್ನವಾದಂತಾಗಿದೆ. ಕಳೆದ ವಾರ ಸ್ನೇಹಿತೆಯ ಮನೆಯಲ್ಲಿ ಊಟ ಮಾಡುವಾಗ, ಊಟ ಮುಗಿಸಿ ಅಲ್ಲೇ ಕುಳಿತ್ತಿದ್ದ ಆಕೆಯ ಮಗನಿಗೆ ‘ಸ್ವಲ್ಪ ಸಾರು ಹಾಕೋ’ ಎಂದೆ. ಅವನು ‘what’ ಅಂದ. ಪಕ್ಕದಲ್ಲಿ ನನ್ನೊಡನೆ ಊಟಕ್ಕೆ ಕುಳಿತ್ತಿದ್ದ ಅಪ್ಪಟ ಕನ್ನಡದವಳಾದ ಗೆಳತಿಗೆ, ‘ನಿಮ್ಮ ಮನೆಯಲ್ಲಿ ಸಾರಿಗೆ ಏನು ಅಂತೀರಿ’ ಎನ್ನುತ್ತಾ ನೋಡಿದಾಗ ಗೊತ್ತಾಯಿತು ಅವಳು ಯಾರೊಂದಿಗೋ ಮೊಬೈಲ್ ನಲ್ಲಿ ಮಾತಾಡುತ್ತಿದ್ದದ್ದು. ಅವಳ ಮಗನಿಗೆ, ‘ನೋಡೋ ಬರಿ ಅನ್ನ ಇದೆ ಏನು ಹಾಕ್ತಿಯ?’ ಎಂದೆ. ಅವನು ‘ರಸಂ ಹಾಕಲಾ’ ಎಂದ. ಆಗ ನನಗೆ ಕನ್ನಡ ಪದಗಳು ಕಳೆದೇ ಹೋಗುತ್ತಿರುವ ಅನುಭವವಾಯಿತು. ನಮ್ಮ …