Tag: Pada
ಪದಂಗುಟ್ಟು
ಕನ್ನಡದ ನನ್ನ ಸ್ನೇಹಿತರ ಮಕ್ಕಳು ಮನೆಯಲ್ಲಿ ಕನ್ನಡ ಮಾತನ್ನಾಡಿದರೂ, ಇಂಗ್ಲೀಷ್ ಶಾಲೆಯಲ್ಲಿ ಓದುತ್ತಿರುವುದರಿಂದ ಅವರ ಕನ್ನಡ ಎಲ್ಲಾ ಭಾಷೆಗಳ ಚಿತ್ರಾನ್ನವಾದಂತಾಗಿದೆ. ಕಳೆದ ವಾರ ಸ್ನೇಹಿತೆಯ ಮನೆಯಲ್ಲಿ ಊಟ ಮಾಡುವಾಗ, ಊಟ ಮುಗಿಸಿ ಅಲ್ಲೇ ಕುಳಿತ್ತಿದ್ದ ಆಕೆಯ ಮಗನಿಗೆ ‘ಸ್ವಲ್ಪ ಸಾರು ಹಾಕೋ’ ಎಂದೆ. ಅವನು ‘what’ ಅಂದ. ಪಕ್ಕದಲ್ಲಿ ನನ್ನೊಡನೆ ಊಟಕ್ಕೆ ಕುಳಿತ್ತಿದ್ದ ಅಪ್ಪಟ ಕನ್ನಡದವಳಾದ ಗೆಳತಿಗೆ, ‘ನಿಮ್ಮ ಮನೆಯಲ್ಲಿ ಸಾರಿಗೆ ಏನು ಅಂತೀರಿ’ ಎನ್ನುತ್ತಾ ನೋಡಿದಾಗ ಗೊತ್ತಾಯಿತು ಅವಳು ಯಾರೊಂದಿಗೋ ಮೊಬೈಲ್ ನಲ್ಲಿ ಮಾತಾಡುತ್ತಿದ್ದದ್ದು. ಅವಳ ಮಗನಿಗೆ, ‘ನೋಡೋ ಬರಿ ಅನ್ನ ಇದೆ ಏನು ಹಾಕ್ತಿಯ?’ ಎಂದೆ. ಅವನು ‘ರಸಂ ಹಾಕಲಾ’ ಎಂದ. ಆಗ ನನಗೆ ಕನ್ನಡ ಪದಗಳು ಕಳೆದೇ ಹೋಗುತ್ತಿರುವ ಅನುಭವವಾಯಿತು. ನಮ್ಮ …